Friday, February 13, 2015

ಸುಮ್ಮನೆ ಗೀಚಿದ್ದು

 






ಬೆರಳತುದಿಯ ತೊಳಲಾಟವ ತಡೆದು
ಮನವೆಕೊ ಸುಯ್ಯುತಿದೆ ಸಾವಿರ ಮಾರು
ತನ್ನೊಳಗಿನ ಕನಸುಗಳನು ಬಾನೆತ್ತರಕೆ ಚಿಮ್ಮಿ
ಆರ್ಭಟಕ್ಕೆ ತತ್ತರಿಸದಿರಲಿ ನೆಚ್ಚಿನ ನಾವೇ


ಮಕರಂದದ ಹುಡುಕಾಟದಲಿ ದುಂಬಿಯ ಮನಸು
ದೇವರ ಪಾದವ ಸೇರುವೆನೆಂಬ ಹೂವ್ವಿನ ಕನಸು
ಅರಿಯದ ದಾರಿಯ ದೂರವನು ಬೆನ್ನಟ್ಟಿ
ಸಮಯದ ನೆರೆಯಲಿ ಹೋಗದಿರಲಿ ಕೊಚ್ಚಿ


ಮನಸಿನೊಳು ನೂರು ಆಲೋಚನೆಗಳ ವರತೆ
ಹೆಜ್ಜೆಗೊಂದು ಸಿಗುತಿಹುದು ಕಹಿನೀರ ಕಂತೆ
ಕೊನೆಗೊಮ್ಮೆ ತಿಳಿದಾಗ ಕಾಡಿತು ಚಿಂತೆ
ಕೂರಲು ಜಾಗವಿಲ್ಲದಷ್ಟು ಗುಂಡಿಗಳ ಸಂತೆ


ಹೋಗದೆ ಬಾರದು ಬರದೇ ಹೋಗದು
ಬಂದಾಗ ಸಿಗದು ಸಿಕ್ಕಾಗ ಬರದು
ಹೊಕ್ಕು ಹುಡುಕಿದಾಗ ಪೋಳ್ಹೆಣಿಸದಿರದು
ಲೆಕ್ಕವ ಹಾಕಿದರು ಲೆಕ್ಕಕ್ಕೆ ಸಿಗದು






-ತಿಳಿದಿದ್ದು
ಮಲ್ಲಪ್ಪ


 

Thursday, April 25, 2013

ತೀರದ ಆಸೆ

 
ನೂರು ನಾಳೆಗಳ ನಡುವೆ ನಿಂತು
ಹೇಳ ಹೊರಟಿದೆ ಕಾಣದ ಕವನ
ಮೂರು ದಿನಗಳ ನಡುವಲಿ ಕೂತು
ಕಟ್ಟದೆ ಕೆಡವಿತೇ ಗೋಪುರವ?
 
ಒಂದು ಹಾಳೆಯಲಿ ನೂರು ಅರ್ಥದಲಿ
ಮೂರು ಹೊತ್ತಿನಲಿ ನಿನ್ನ ಪಕ್ಕದಲಿ
ಮುಂಜಾನೆಯ ರವಿಯ ಮುಳುಗಿದ ಕಿರಣದಲಿ
ಯಾರ ಭಾವದಲಿ ಯಾವ ಅರ್ಥದಲಿ?
 
ಬಂದ ದಾರಿಯಲಿ ಬಂಧ ಬಂದಾಗ
ದೂರ ಕಾಣದೇ ದೂರವ ದೂರುತಲಿ
ಹೊರಟೆನೆಂದು ಬೆಂದು ಕೂತಿರುವೆ
ಯಾವ ಬಂಧವ ತೊರೆದು ನೀನಿಲ್ಲಿ ಬಂದಿರುವೆ?


ಮಲ್ಲಪ್ಪ

Monday, February 18, 2013

ಗುರುತು

ಭಾವ ಬಂಧನದಲಿ ಸಿಲುಕಿ ಸುಮ್ಮನೇ
ನೂರು ಗೊಂದಲಗಳು ಕುಲುಕಿ ಮೆಲ್ಲನೆ
ಯಾವ ಮೋಹದ ಬೆನ್ನ ಹತ್ತಿರುವೆ
ನಿನ್ನ ಗುರುತು ಮಾಡಿಕೊಡು ನಿನಗೆ

ಕಳೆದು ಹೋದ ಕೋಟಿ ಕನಸುಗಳನು
ಸಲುಹಿ ಸಾಕುತಿಹೆ ಯಾಕೆ ಸುಮ್ಮನೇ
ಒಂದು ಸಿಗದೆ ಮತ್ತೊಂದು ಕಳೆಯದು
ನಿನ್ನ ಗುರುತು ಮಾಡಿಕೊಡು ನಿನಗೆ

ಉರ ತುಂಬೆಲ್ಲ ದೀಪದ ಬೆಳಕು
ಯಾವ ಬೆಳಕಲ್ಲಿ ಅಡಗಿದೆ ಹೊಳಪು
ಬೆಳಕೆಂಬ ಕತ್ತಲಲ್ಲಿ ಏನು ಹುಡುಕಿಹೆ
ನಿನ್ನ ಗುರುತು ಮಾಡಿಕೊಡು ನಿನಗೆ

ಹೋದ ದಾರಿಯಲಿ ನೂರಾರು ಮುಳ್ಳು
ಹೂವನೊಮ್ಮೆ ಹುಡುಕಿನೋಡು ದಾರಿಯಲಿ
ಸಿಗದೆ ಹೋದರೆ ಅದಕ್ಕೆ ನೀನೆ ಹೊಣೆ
ನಿನ್ನ ಗುರುತು ಮಾಡಿಕೊಡು ನಿನಗೆ


ನನ್ನದೊಂದು ಗುರುತು
ಮಲ್ಲಪ್ಪ.

Thursday, February 7, 2013

ಮೌನದ ಕೂಗು

ಮೌನದ ಕೂಗು 
 
ಯಾರು ಬರೆದರು ಹಾಳು ಹಣೆಬರಹವನ್ನ
ನೂರು ದಾರಿಗಳಲು ಕವಲು ದಾರಿಗಳನ್ನ
ಹೋದ ಕಡೆಯಲೆಲ್ಲ ಮೂಲದ ಮರೆವು
ಯಾವ ಮೂಲವ ಹೇಳಲಿ ನಾನಿನ್ನೂ?
ಚಿತ್ತ ಚಂಚಲವ ಎಷ್ಟು ಹಂಚಲಿ
ಹೆಂಚಮೇಲಿನ ರೊಟ್ಟಿ ಹೊತ್ತಿ ಹೋಗಿಹದು
ಜಾತ್ರೆಯಲಿ ನಿಂತು ಆಲಿಸ ಹೊರಟೆ
ನಿಶಬ್ಧತೆಯಲ್ಲಿ ಕೇಳಿದ ನೀರಹನಿಯ ಸದ್ದು
ನಗುವಿನ ಜೊತೆ ಅಳುವೂ ಹುಟ್ಟಿರಬೇಕು
ಅಮ್ರತದ ಜೊತೆ ವಿಷವೂ ದೊರೆತಹಾಗೆ
ಯಾವ ಕಂಠದಿ ಕರೆಯಲಿ ನೀಲಕಂಠನ
ಆಕಾಶವು ಬಣ್ಣದಲಿ ನೀಲಿಯಲ್ಲವೆ? 

Wednesday, December 12, 2012

ಬಿಂಬದ ತುಂಬ


ನೀನೊಂದು ಗುಲಾಬಿಯ ಹೂವ್ವೆಂದು ತಿಳಿದಿರಲಿಲ್ಲ ನನಗಿನ್ನೂ
ನೀನೊಂದು ಗುಲಾಬಿಯ ಹೂವ್ವೆಂದು ತಿಳಿದಿರಲಿಲ್ಲ ನನಗಿನ್ನೂ
ಅರಳೋ ಮುಂಚೆ ಚುಚ್ಚುವ ಮುಳ್ಳೆಂದು ಅಂದುಕೊಂಡಿದ್ದೇನು
ಮೃದು ಮನಸಿನವಳೆಂದು ತೋರಲಿಲ್ಲ ನಿನ್ನನ್ನೇ ನೀನು
ತಿಳಿಯಿತಲ್ಲ ತೊಟ್ಟ ಮುಳ್ಳು ಬರಿ ತೋರಿಕೆಯ ಹೊರಬಿಂಬವನ್ನು

 

ಮನಸುಬಿಚ್ಚಿ ಹಾರುವ ಹಕ್ಕಿಯೆಂದು ಗೊತ್ತಿರಲಿಲ್ಲ ನನಗಿನ್ನೂ
ಮನಸುಬಿಚ್ಚಿ ಹಾರುವ ಹಕ್ಕಿಯೆಂದು ಗೊತ್ತಿರಲಿಲ್ಲ ನನಗಿನ್ನೂ
ಮನಸು ಬಂದಾಗ ಹಾರಿಹೋಗುವೆ ಎಂದುಕೊಂಡಿದ್ದೆ ನಾನು
ನಿರ್ಮಲ ಆಗಸವ ತೋರಿಸುವೆ ಎಂದೆನ್ನಲಿಲ್ಲ ನೀನು
ನಿನ್ನ ಹೆಸರಿನ ಉಸಿರು ನನ್ನೊಳಗಿದ್ದಾಗಲೆ ಹಾರತೊಡಗಿದೆ ನಾನು

 
ನಿರ್ಮಲವಾಗಿ ಹರಿಯುವ ನೀರೆಂದು ಅನಿಸಿರಲಿಲ್ಲ ನನಗಿನ್ನೂ
ನಿರ್ಮಲವಾಗಿ ಹರಿಯುವ ನೀರೆಂದು ಅನಿಸಿರಲಿಲ್ಲ ನನಗಿನ್ನೂ
ಬಾಳಿನ ಪ್ರವಾಹದಲಿ ಮುಳುಗಿಸುವೆ ಎಂದುಕೊಂಡಿದ್ದೆ ನಾನು
ಲೆಕ್ಕವಿಲ್ಲದಷ್ಟು ಜೀವಿಗಳ ಪ್ರಪಂಚವೆಂದು ತೋರಲಿಲ್ಲ ನಿನ್ನನ್ನೇ ನೀನು
ಅರ್ಥವಾಯಿತು ಕೊಳೆಯನ್ನು ತೊಳೆಯುವ ಶಕ್ತಿಯೆಂದು ನೀನು.

Tuesday, January 24, 2012

ಮರೆತಿರುವ ಮಾತು



ಎಂದೋ ಮರೆತುಹೋದ ಮಾತು ನೀನು
ಅಲ್ಲೇ ಕಳೆದುಹೋದ ಮುತ್ತು ನೀನು
ಅರೆಯೋಮುನ್ನವೆ ಮರೆಯಾಗಿಹೋದೆ
ಇನ್ನು ಮುಂದೇನು ಹೇಳಲಿ ನಾನು?

ಮುಸುಕಿನಲಿ ಮೂಡಿರುವ ಮೌನದಹಾಗೆ
ಕೆಸರಿನಲ್ಲಿ ಅರಳಿರುವ ತಾವರೆಹಾಗೆ
ಹೆಸರಿಡಲಾಗದ ಭಾವನೆಯಹಾಗೆ
ಉಸಿರಿನಲಿ ಬೆರೆತಿದ್ದೆ ನೀನು ನನ್ನೊಳಗೆ

ಕನಸಿನಲಿ ಕುಸುಮಗಳ ತೋಟವೇ ನೀನು
ಮನಸಿನಲಿ ಉಳಿದಿರುವ ವೇದನೆಯು ನೀನು
ಹಳಸದಿರುವ ಬಹುದಿನದ ತುತ್ತು ನೀನು
ಆದರು ಕನವರಿಸುತ್ತಿರುವೆ ಪ್ರತಿ ಹೊತ್ತು ನಾನು

ಹಾಲಿನಲ್ಲಿ ಅವಿತಿರುವ ಕೆನೆಯಹಾಗೆ
ಕರಿಮೋಡದಲ್ಲಿ ಕಾದಿರುವ ಬಿಂದುವಿನಹಾಗೆ
ಉಸಿರಿನಲಿ ಬೆರೆತಿರುವ ಪ್ರಾಣದಹಾಗೆ
ಬೆರೆತಿರುನಿ ಎಂದೆಂದು ನನ್ನಲಿ ಹೀಗೆ!!



ಅಳಿಸಲಾಗದ ನೆನಪು
ಮಲ್ಲಪ್ಪ.

Monday, November 28, 2011

ನನ್ನ ನೆನಪೇ

ಮಧುರವಾಗಿದೆ ಅಧುರ ಭಾವನೆ
ಕೇಳಿಸದೆ ಪಿಸುಗುಟ್ಟಿದೆ ಒಂದೇ ಸಮನೆ
ಕಾಣದಿರುವ ಹಾಳೆಯಲಿ ಮೂಡುತಿದೆ
ಓದಲಾಗದ ಸುಮಧುರ ಕವನ

ಉಸಿರಿನಲಿ ಬಂಧಿಸುವ ಭಯಕೆ ಮೂಡಿ
ಮೌನವಾಗುತಿದೆ ಕ್ಷಣಹೊತ್ತು ಈ ಹೃದಯ
ಚಿತ್ರಿಸುವ ಆಸೆಗಾಗಿ ಬಣ್ಣ ಹೊತ್ತು
ಕಾದು ಕುಳಿತಿದೆ ಮನಸು ತುಂಬ ಹೊತ್ತು

ಸುಂದರವಾಗಿ ಕಟ್ಟಿರುವ ಭವ್ಯ ಬಂಗಲೆಯಲಿ
ಕರೆದು ಹೋಗುವೆ ನನ್ನ ಒಂದೇ ದಾರಿಯಾಲಿ
ಕೆದುಕಿ ಸೋತಿರುವೆ ಬಾರಿ ಬಾರಿ
ಸಿಗಲಾರದು ನಿನ್ನ ಮೂಲಕ್ಕೆ ದಾರಿ  

ಘಾಸಿ ಆಗಿರುವೆ ನಾ ನೂರೆಂಟು ಬಾರಿ
ಆದರು ಬಿಡದಾದೆ ನಿನ್ನ ಸವಾರಿ
ಸಾಕು ನಿಲ್ಲಿಸಿಬಿಡು ತಂಪಾದ ಗಾಳಿ
ನೀನೆಸ್ಟು ಕ್ರೂರ ಓ ನನ್ನ "ನೆನಪೇ"?


-ತಾನಾಗೆ ಮೂಡಿದ ಸಾಲುಗಳು
ಮಲ್ಲಪ್ಪ