Monday, September 26, 2011

Kalpane

ಬರೆಯೋ ಅಕ್ಷರ ಭಾವನೆಗಳ ಬಿಂಬ
ಸುಮ್ಮನೆ ಬರೆದರೂ ಕಾಡುವದು ತುಂಬ
ಯಾರಿಗಾಗಿ ಬರೆದರೇನು ಬಿಡಲಾರೆ ಎಂಬ
ಬರವಸೆಯ ಕೊಡಲೇನು ಇ ಹೊತ್ತಿನಿಂದ

ದೊರವೆಂಬ ದಾರಿಗೆ ದೀಪವಾಗುವೆ
ಮನಸೆಂಬ ಮಗುವಿಗೆ ಲಾಲಿಹಾಡಗುವೆ
ಯಾವದೋ ಯೋಚನೆಗೆ ಪರಿಹಾರವಾಗುವೆ
ಬದುಕೆಂಬ ಬಂಗಲೆಯ ಬಿಡಲಾರದೆ ಕಾಯುವೆ

ಅನಿಸಿಕೆಗೆ ಅನಿಸುವದೆ ಏನು ಸುಂದರ
ಬೇಕಿಲ್ಲ ಬಾಷೆ ಬಾಂದವ್ಯದ ಭಂಡಾರ
ಸಿಗದಿದ್ದರೂ ಹುಡುಕಿ ಕಡಬಲ್ಲದು ಉತ್ತರ
ಅದಕೆಂದು ಕೊಡಲಾರೆ ನಾ ಪ್ರತಿಉತ್ತರ

ಕರೆದರೂ ಬರದಾದೆ ನನ್ನ ಎದುರಿಗೆ
ಬರೆದರೂ ಮುಡದಾದೆ ಯಾಕೆ ಹೀಗೆ
ಏನೆಂದು ಬರೆದೇನು ನಿನ್ನ ಬಗೆಗೆ 
ಉತ್ತರವ ಕೊಡು ನೀನು ನಿನ್ನ ಬಗ್ಗೆ.


 ನಿನ್ನದೇ ಕಲ್ಪನೆ
- ಮಲ್ಲಪ್ಪ.

Tuesday, September 20, 2011

huvina rhuna

ಹೇ ಹೂವ್ವೇ ನಿನದೆಂತ ಜನುಮ
ನಿ ಅರಳಿದಾಗ ಎಲ್ಲರೂ ನಿನಗೆ ಶರಣು
ಯಾವ ಜನುಮದ ಪಾಪಕೆ
ತೆರುವೆ ನಿನ್ನ ಜೀವ ಪ್ರತಿದಿನ?

ಕನಸಿಗೂ ಕವಿತೆ ಬರೆವಾಸೆ
ಆದರೆ ಅದಕೊಂದು ಚಿಂತೆ
ಅರಳೋ ಹೂವೆ ನಿಲ್ಲದು ಒಂದು ದಿನ
ಹೇಗೆ ಕೇಳಿತು ನನ್ನ ಕವನ?

ಮೌನವೇ ಬಾಷೆಯಾದರೆ ಕೆಡಕೆನು
ಅರಿಯೋ ಮುನ್ನವೇ ಕರೆಯೋ ಸಾವು
ನೀನೆಂದು ಕೊಡಲಿಲ್ಲ ಯಾರಿಗೂ ನೋವು
ಮರಳಿ ಮುಂಜಾನೆ ಕಾಯುವೆ ಯಾರಿಗೆ?


ನಿನ್ನದೇ ನೆನಪಿಗೆ-
ಮಲ್ಲಪ್ಪ.