Monday, February 18, 2013

ಗುರುತು

ಭಾವ ಬಂಧನದಲಿ ಸಿಲುಕಿ ಸುಮ್ಮನೇ
ನೂರು ಗೊಂದಲಗಳು ಕುಲುಕಿ ಮೆಲ್ಲನೆ
ಯಾವ ಮೋಹದ ಬೆನ್ನ ಹತ್ತಿರುವೆ
ನಿನ್ನ ಗುರುತು ಮಾಡಿಕೊಡು ನಿನಗೆ

ಕಳೆದು ಹೋದ ಕೋಟಿ ಕನಸುಗಳನು
ಸಲುಹಿ ಸಾಕುತಿಹೆ ಯಾಕೆ ಸುಮ್ಮನೇ
ಒಂದು ಸಿಗದೆ ಮತ್ತೊಂದು ಕಳೆಯದು
ನಿನ್ನ ಗುರುತು ಮಾಡಿಕೊಡು ನಿನಗೆ

ಉರ ತುಂಬೆಲ್ಲ ದೀಪದ ಬೆಳಕು
ಯಾವ ಬೆಳಕಲ್ಲಿ ಅಡಗಿದೆ ಹೊಳಪು
ಬೆಳಕೆಂಬ ಕತ್ತಲಲ್ಲಿ ಏನು ಹುಡುಕಿಹೆ
ನಿನ್ನ ಗುರುತು ಮಾಡಿಕೊಡು ನಿನಗೆ

ಹೋದ ದಾರಿಯಲಿ ನೂರಾರು ಮುಳ್ಳು
ಹೂವನೊಮ್ಮೆ ಹುಡುಕಿನೋಡು ದಾರಿಯಲಿ
ಸಿಗದೆ ಹೋದರೆ ಅದಕ್ಕೆ ನೀನೆ ಹೊಣೆ
ನಿನ್ನ ಗುರುತು ಮಾಡಿಕೊಡು ನಿನಗೆ


ನನ್ನದೊಂದು ಗುರುತು
ಮಲ್ಲಪ್ಪ.

Thursday, February 7, 2013

ಮೌನದ ಕೂಗು

ಮೌನದ ಕೂಗು 
 
ಯಾರು ಬರೆದರು ಹಾಳು ಹಣೆಬರಹವನ್ನ
ನೂರು ದಾರಿಗಳಲು ಕವಲು ದಾರಿಗಳನ್ನ
ಹೋದ ಕಡೆಯಲೆಲ್ಲ ಮೂಲದ ಮರೆವು
ಯಾವ ಮೂಲವ ಹೇಳಲಿ ನಾನಿನ್ನೂ?
ಚಿತ್ತ ಚಂಚಲವ ಎಷ್ಟು ಹಂಚಲಿ
ಹೆಂಚಮೇಲಿನ ರೊಟ್ಟಿ ಹೊತ್ತಿ ಹೋಗಿಹದು
ಜಾತ್ರೆಯಲಿ ನಿಂತು ಆಲಿಸ ಹೊರಟೆ
ನಿಶಬ್ಧತೆಯಲ್ಲಿ ಕೇಳಿದ ನೀರಹನಿಯ ಸದ್ದು
ನಗುವಿನ ಜೊತೆ ಅಳುವೂ ಹುಟ್ಟಿರಬೇಕು
ಅಮ್ರತದ ಜೊತೆ ವಿಷವೂ ದೊರೆತಹಾಗೆ
ಯಾವ ಕಂಠದಿ ಕರೆಯಲಿ ನೀಲಕಂಠನ
ಆಕಾಶವು ಬಣ್ಣದಲಿ ನೀಲಿಯಲ್ಲವೆ?