Tuesday, January 24, 2012

ಮರೆತಿರುವ ಮಾತುಎಂದೋ ಮರೆತುಹೋದ ಮಾತು ನೀನು
ಅಲ್ಲೇ ಕಳೆದುಹೋದ ಮುತ್ತು ನೀನು
ಅರೆಯೋಮುನ್ನವೆ ಮರೆಯಾಗಿಹೋದೆ
ಇನ್ನು ಮುಂದೇನು ಹೇಳಲಿ ನಾನು?

ಮುಸುಕಿನಲಿ ಮೂಡಿರುವ ಮೌನದಹಾಗೆ
ಕೆಸರಿನಲ್ಲಿ ಅರಳಿರುವ ತಾವರೆಹಾಗೆ
ಹೆಸರಿಡಲಾಗದ ಭಾವನೆಯಹಾಗೆ
ಉಸಿರಿನಲಿ ಬೆರೆತಿದ್ದೆ ನೀನು ನನ್ನೊಳಗೆ

ಕನಸಿನಲಿ ಕುಸುಮಗಳ ತೋಟವೇ ನೀನು
ಮನಸಿನಲಿ ಉಳಿದಿರುವ ವೇದನೆಯು ನೀನು
ಹಳಸದಿರುವ ಬಹುದಿನದ ತುತ್ತು ನೀನು
ಆದರು ಕನವರಿಸುತ್ತಿರುವೆ ಪ್ರತಿ ಹೊತ್ತು ನಾನು

ಹಾಲಿನಲ್ಲಿ ಅವಿತಿರುವ ಕೆನೆಯಹಾಗೆ
ಕರಿಮೋಡದಲ್ಲಿ ಕಾದಿರುವ ಬಿಂದುವಿನಹಾಗೆ
ಉಸಿರಿನಲಿ ಬೆರೆತಿರುವ ಪ್ರಾಣದಹಾಗೆ
ಬೆರೆತಿರುನಿ ಎಂದೆಂದು ನನ್ನಲಿ ಹೀಗೆ!!ಅಳಿಸಲಾಗದ ನೆನಪು
ಮಲ್ಲಪ್ಪ.