Monday, October 24, 2011

ಹಾಳೆಗಳ ನಡುವೆ ಗಾಳಿಗೊಂದು ಗುಟ್ಟು 
ನಾಳೆಗಳ ನಡುವೆ ನಿನಗೊಂದು ಮುತ್ತು
ಅನಿಸಿಕೆಗೆ ಅನುವಾಗಿರುವೆ ಅಳಿಸಬೇಡ ನನ್ನ 
ಬೇಸರವ ಬರೆದಿರುವೆ ಕ್ಷಮಿಸಿಬಿಡು ಒಮ್ಮೆ

ಮನಸಿನಲೊಂದು ಮೂಡಿದೆ ಸುಂದರ ಭಾವ
ಮಳೆಇಲ್ಲದೆ ಹಸಿರಾಗಿದೆ ಅದರ ಅಂಗಳ
ಒಣಗುವ ಮುನ್ನ ಬಂದುಹೋಗು ಮನದಲಿ ಹಾಗೆ
ಅರಳಿದೆ ನಿನಗೆಂದು ಒಂದು ಸುಂದರ ಹುವ್ವು

ಮುಂಜಾನೆಯ ಮುಸುಕಿನ ಮಂಜಿನ ಹನಿಯೇ
ಹೊಸದಾಗಿ ಹೇಳಲೇನು ನಿನ್ನ  ಅಂಜಿಕೆ
ಕಾಯಲಾರೆ ನೀನು ಒಂದು ಸ್ಪರ್ದೆಗಾಗಿ
ಚಲುವಿನ ಅ ಮೊಗದೆದುರು ನಿ ಗೆಲ್ಲದಾದೆ


-ಒಂದು ಕವಿತೆ
ಮಲ್ಲಪ್ಪ

No comments:

Post a Comment