Tuesday, October 25, 2011



ಪ್ರತಿದಿನ ಈ ಭೂಮಿಯಲ್ಲಿ ಮುಂದೆ ಒಂದು ಹೆಸರಿನಿಂದ ಕರೆಸಿಕೊಳ್ಳುವ ಮನುಷ್ಯರ ಜನನ ಆಗುತ್ತಿದೆ. ಕಲ್ಲಿನಿಂದ ಬೆಂಕಿಯನ್ನು ಉತ್ಪಾದಿಸುವದರಿಂದ ಹಿಡಿದು ಒಂದು ಸಣ್ಣ ಅಣುವಿನಿಂದ ಈ ಭುಲೋಕವನ್ನು ನಾಶಮಾಡುವಂತಹ ಸಾಧನವನ್ನ ಕಂಡು ಹಿಡಿದಿದ್ದೇವೆ. ಒಬ್ಬ ಮನುಷ್ಯ ಏನೆಲ್ಲ ಸಾಧನೆ ಮಾಡಿದರು ಒಂದಲ್ಲ ಒಂದು ದಿನ ಆ ಸಾಧನೆ ಮತ್ತು ಅವನ ಹೆಸರು ನಿರ್ನಾಮ ಆಗುವದರಲ್ಲಿ ಯಾವುದೇ ಸಂದೇಹವಿಲ್ಲ. ನಾವು ಪ್ರಸ್ತುತವಿರುವ ಸಾಧಕರ ಜೀವನ ಚರಿತ್ರೆಯನ್ನು ಓದಿ ನಮ್ಮ ಜೀವನದಲ್ಲಿ ಅಳುವಡಿಸಲು ಪ್ರಯತ್ನಿಸುತ್ತೇವೆ. ಅದು ಸರ್ವೇ ಸಾಮಾನ್ಯ ಕೂಡ.

ನಮ್ಮ ಭರತಖಂಡದಲ್ಲಿ ೧೯೪೭ ಇಸವಿಗಿಂತ ಮುಂಚೆ ದೇಶವನ್ನು ಸ್ವಂತಂತ್ರ ಮಾಡಲು ಅಸಂಖ್ಯಾತ ಜನರು ರಕ್ತ ಹರಿಸಿದ್ದಾರೆ. ಕೆಲವೇ ಕೆಲವು ಹೆಸರುಗಳು ಮಾತ್ರ ಮುಂಚುನಿಯಲ್ಲಿವೆ ಆದರೆ ಹೆಸರಿದ್ದರೂ ಹೆಸರಾಗದ ಕೋಟ್ಯಂತರ ಭಾರತೀಯರಿದ್ದಾರೆ. ಒಮ್ಮೆಯೋಚಿಸಿನೋಡಿ ನಿಮ್ಮ ತಾತ ಇಲ್ಲ ಅವರ ಸಹೋದರ ಇಲ್ಲವೇ ಅವರ ತಂದೆ ಒಬ್ಬರಾದರು ಈ ಹೋರಾಟದಲ್ಲಿ ಭಾಗಿಯಾಗಿಲ್ಲವೇ? ಯಾಕಿಲ್ಲ, ಆ ಹೋರಾಟದಲ್ಲಿ ಪ್ರತಿಯೊಬ್ಬರ ಪಾತ್ರವಿದೆ ಆದರೆ ಅವರು ಹೆಸರು ಮಾತ್ರ ಉಳಿದವರಂತೆ ಹೆಸರುವಾಸಿ ಆಗಿಲ್ಲ. ನಾನೇನು ಪ್ರತಿ ಹೆಸರು ಹೆಸರುವಾಸಿ ಆಗಬೇಕು ಅನ್ನುವವನಲ್ಲ ಹಾಗೇ ಆಗುವದು ಅಸಾದ್ಯ ಕೂಡ.

ಮೇಲಿನ ಭಾವಚಿತ್ರವನ್ನು ನೋಡಿ ನಾನು ಎನನ್ನು ಹೇಳಲು ಭಯಸುತ್ತಿರುವೇನು ಅನ್ನುವದು ನಿಮಗೆ ತಿಳಿದಿರಬೇಕು.  ಹೌದು ಭಗತ್ ಸಿಂಗ ಅನ್ನುವ ಒಬ್ಬ ಅಸಾಧಾರಣ ಕ್ರಾಂತಿಕಾರಿ ಬಗ್ಗೆ. ನಿಮಗಿದು ನೆನಪಿರಲಿ ಅವರನ್ನು ಗಲ್ಲಿಗೆ ಏರಿಸಿದಾಗ ಅವರ ವಯಸ್ಸು ಕೇವಲ ೨೩! ಒಬ್ಬ ಮಾನವನ ಜೀವನಚರಿ ಹೀಗಿದೆ, ೧೨ನೆ ವರುಷಕ್ಕೆ ನಮಗೆ ಅನಿಸುವದು ನಾವಿನ್ನು ಮಗುವಲ್ಲ ಎಂದು. ೧೫ನೆ ವರುಷಕ್ಕೆ ಒಂದುಮಧ್ಯಮ ರೀತಿಯಲ್ಲಿ ಶಿಕ್ಷಣ ಪಡೆದಿರುತ್ತೇವೆ ಹಾಗೇ ೨೧ನೆ ವಯಸ್ಸಿಗೆ ನಮ್ಮನ್ನು ತಡೆದು ನಿಲ್ಲಿಸಲಾಗದಷ್ಟು ಕೊಬ್ಬಿರುತ್ತೇವೆ. ನಾವು ಒಂದು ಸಂಸಾರ ನೀಗಿಸಲು ಅರ್ಹರು ಎಂದು ಅನಿಸುವ ವೇಳೆಗೆ ನಮ್ಮ ವಯಸ್ಸು ೩೦ರ ಗಡಿ ದಾಟುವದರದಲ್ಲಿ ಯಾವುದೇ ಸಂದೇಹವಿಲ್ಲ. ಅಂತಹದರಲ್ಲಿ ಆ ಚಿಕ್ಕ ವಯಸ್ಸಿನ್ನಲ್ಲಿ ಅವರು ಮಾಡಿರುವ ಸಾಧನೆ ಮತ್ತು ಸಂಪಾದಿಸಿದ್ದ ವಿಷಯ ಪರಿಣಿತಿಯನ್ನು ಸರಿಗಟ್ಟುವದು ತುಂಬಾ ಕಷ್ಟದ ಕೆಲಸ. ೧೦೦ಕ್ಕೆ ೯೦ ಅಂಕ ಗಳಿಸುವ ವಿಧ್ಯಾರ್ಥಿಗೆ ಸನ್ಮಾನ ಸಾಮಾನ್ಯ ಆದರೆ ಅವನು ಓದಿರುವ ವಿಷಯಗಳಲ್ಲಿ ಏನೆಲ್ಲ ಅವನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾದ್ಯವೋ ಎಂಬುದನ್ನು ವಿಶ್ಲೇಷಿಸುವ ಗೋಜಿಗೆ ಹೋಗುವುದಿಲ್ಲ. ಹೆಚ್ಚಿನ ಅಂಕ ಪಡೆದರೆ ಮಾತ್ರ ಮನೆಯಲ್ಲಿ ಪ್ರವೇಶ ಉರಿನಲ್ಲಿ ಗೌರವ ಆದರೆ ಆ ಅಂಕಗಳು ಅವನನ್ನು ಡಾಕ್ಟರೋ ಇಲ್ಲವೇ ತಾಂತ್ರಿಕನನ್ನಾಗಿ ಮಾಡುವದೇ ಹೊರತು ಅವನನ್ನು ಅವನನ್ನಾಗಿ ಮಾಡಲಾರದು. ನಾವು ಸ್ನೇಹಿತನನ್ನು ಪರಿಚಯ ಮಾಡುವಾಗ ಹೆಸರಿನ ಜೊತೆಗೆ ಅವನ ವೃತ್ತಿಯನ್ನು ಹೇಳುತ್ತೇವೆ. ಹಾಗೇನಾದರು ಅವನ ವೃತ್ತಿ ಒಂದು ಮಟ್ಟದ್ದಾಗಿರದಿದ್ದರೆ ಅವನನ್ನು ಪರಿಚಯ ಮಾಡಿಸಲು ಹಿಂದೆ ಮುಂದೆ ನೋಡುವದು ಸಹಜ. ನಾವು ಈಗ ನಮ್ಮ ಸ್ವಂತ ಹೆಸರಿನ ಮೇಲೆ ನಿಂತಿಲ್ಲ, ಆದರೆ ಭಗತ್ ಮತ್ತು ಅವನ ಸಹಪಾಟಿಗಳು ಮಾಡಿದ ಕೆಲಸ ಅವರನ್ನು ಹೆಸರುವಾಸಿಯನ್ನಗಿ ಮಾಡಿತು. ಆ ಚಿಕ್ಕ ವಯಸ್ಸಿನಲ್ಲಿ ಅವರು ಸಾಕಷ್ಟು ಪುಸ್ತಕಗಳನ್ನು ಓದಿದ್ದರು, ಅವರು ಓದಿರುವ ಹಿಚ್ಚಿನ ಪುಸ್ತಕಗಳೆಂದರೆ ರಷ್ಯ ದೇಶದ ಕ್ರಾಂತಿಕಾರಿಗಳು ಬರೆದಿದ್ದಂತಹ ಪುಸ್ತಕಗಳು. ನಾವು ಪರೀಕ್ಷೆಗಾಗಿ ಓದುತ್ತೇವೆ ಹೊರತು ಅಭಿರುಚಿಗಾಗಿ ಅಲ್ಲ. ನೆನಪಿಡಿ: ಅವರನ್ನು ಗಲ್ಲಿಗೆ ಏರಿಸುವ ಸಮಯ ಬಂದಾಗ ಅವರು ಪುಸ್ತಕವನ್ನು ಓದುತ್ತಿದ್ದರು, ಅವರು ಮೊದಲ ಕೊರಿಕೆಯಂದರೆ ಪುಸ್ತಕವನ್ನು ಓದಿದ ನಂತರ ಗಲ್ಲಿಗೆ ಏರಿಸಬೇಕೆಂದು. ಅದು ನೆರವೇರಲಿಲ್ಲ ಆದರೆ ಅವರ ಓದುವ ಮತ್ತು ತಿಳಿದುಕೊಳ್ಳುವ ಅಭಿರುಚಿ ಪ್ರತಿಯೊಬ್ಬರ ಎದೆ ಜಲ್ ಎನಿಸುವದರಲ್ಲಿ ಸಂದೇಹವೇ ಇಲ್ಲ.

"ಇನಕ್ವಿಲಾಬ ಜಿಂದಾಬಾದ್."
"ಕ್ರಾಂತಿ ಅಮರವಾಗಲಿ" (ಭಗತ್ ಅವರ ಮೆಚ್ಚಿನ ಜೈಗೋಷಗಳು)


- ಸಣ್ಣದೊಂದು ಪ್ರಯತ್ನ
ಮಲ್ಲಪ್ಪ

No comments:

Post a Comment