Wednesday, November 16, 2011

ಎತ್ತಲೋ ದಾರಿ ಎಲ್ಲಿಗೆ ಪಯಣ?

ಬಾಲ್ಯದ ದಿನಗಳನು ನೆನೆದರೆ ಮನಸ್ಸು ಖುಷಿಇಂದ ನಲಿದಾಡುವದು ಹಾಗು ಅಷ್ಟೇ ಬೇಸರಗೊಳ್ಳುವದು. ಎಷ್ಟು ಸುಂದರ ಆ ದಿನಗಳು, ತಿರುಗಿ ಬರಬಾರದೇ ಇನ್ನೊಮ್ಮೆ? ಬಾಲ್ಯವನ್ನು ಅತ್ಯಂತ ಸುಂದರವಾಗಿ ಅನುಭವಿಸುವವರಲ್ಲಿ ನಗರ ಪ್ರದೇಶದ ಮಕ್ಕಳಿಗಿಂತ ಹಳ್ಳಿಗಾಡು ಮಕ್ಕಳೇ ಜಾಸ್ತಿ. ನಗರ ಪ್ರದೇಶದ ಪಾಲಕರಿಗೆ ಮಗನ ಭವಿಷ್ಯದ ಮೇಲೆ ನಿಗಾ ಜಾಸ್ತಿ, ಮಗು ಮಾತನಾಡಲು ಆರಂಭಿಸಿದ ದಿನದಿಂದ ಅವನು ತನ್ನ ಭವಿಷ್ಯಕ್ಕಾಗಿ ಸರ್ಕಸ್ ಮಾಡಲು ಆರಂಭಿಸಬೇಕು. ಅವನಿಗೆ ತನ್ನ ಬಾಲ್ಯವನ್ನು ಅನುಭವಿಸಲೂ ಕೂಡ ಅವಕಾಶವಿರುವದಿಲ್ಲ. ಆ ಸುಂದರ ಸಮಯವನ್ನು ಕಾಣದ ಭವಿಷ್ಯಕ್ಕಾಗಿ ಧಾರೆಯೆರೆಯಬೇಕು, ಅವನು ಮನೆಯ ಹೊರಗಡೆ ಹೋಗುವ ಹಾಗಿಲ್ಲ ಯಾಕಂದರೆ ಇಗ ಮನೆಯಲ್ಲಿ ಸಿಗುವ ಪಾಠವೇ ಅಂತಂದು.

ಕೆಲವು ದಿನಗಳ ಹಿಂದೆ ನಾನು ಬೆಂಗಳೂರಿನ ಒಂದು ಪ್ರತಿಷ್ಟಿತ ವಿಧ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ಕುಳಿತುಕೊಂಡಿದ್ದೆ ಅಲ್ಲಿ ನನಗೆ ಕಂಡು ಬಂದ ಒಂದು ದೃಶ್ಯ ಮನಸ್ಸಿನಲ್ಲಿ ನೂರೆಂಟು ಯೋಚನೆಗಳನ್ನು ಹುಟ್ಟುಹಾಕಿತು. ಕೆಲವೊಂದಿಷ್ಟು ಪುಟ್ಟ ಬಾಕಲರು ಅಲ್ಲಿ ಕ್ರಿಕೆಟ್ಅನ್ನು ಆಡುತ್ತಿದ್ದರು, ಅವರು ತೊಟ್ಟ ಬಟ್ಟೆ ಮತ್ತು ಇದ್ದ ವಾತಾವರಣ ನೋಡಿ ನನಗನೆ ಅವರೆಲ್ಲ ಸಿರಿವಂತರ ಮನೆಯಿಂದ ಬಂದವರೆಂದು ಅನ್ನಿಸುವದಕ್ಕೆ ಹೆಚ್ಚು ಕಾಲ ಬೇಕಾಗಲಿಲ್ಲ. ಅವರಿಗೆಲ್ಲ ಒಬ್ಬ ಪರಿಣಿತ ಶಿಕ್ಷಕ ಹೇಳಿಕೊಡುತ್ತಿದ್ದ. ಆಗ ನನ್ನ ಮನಸ್ಸಿನಲ್ಲಿ ಇನ್ನೊಂದು ದೃಶ್ಯ ಹಾಗಿ ಹಾಯ್ದು ಹೋಯಿತು. ಅದೇ ಪಾಲಕರು ತಮ್ಮ ಮಕ್ಕಳು ಮನೆಯ ಮುಂದೆ ಆಡುತ್ತಿದ್ದಾರೆ ಸಹಿಸಿಕೊಳ್ಳಬಲ್ಲರ? ನಾವು ಸಾಮಾನ್ಯವಾಗಿ ಬೆಂಗಳೂರಿನ ಯಾವುದೇ ಪ್ರದೇಶದಲ್ಲಿ ಹೋದರು, ಬರಿ ಮನೆಗಳಿರುವ ಜಾಗದಲ್ಲಿ ಹೋದರುಕುಡ ಮಕ್ಕಳು ಅಡುತ್ತಿರುವದು ಕಾನಸಿಗುವದಿಲ್ಲ. ಮಕ್ಕಳು ಆಡಲು ಸಹ ಅವರಿಗೆ ಒಬ್ಬ ಶಿಕ್ಷಕನ ಅವಶ್ಯಕತೆ ಇದೆಯೇ? ಅವರಿಗೆ ತಮ್ಮ ಬಾಲ್ಯವನ್ನು ಸಹ ಆನಂದಿಸುವ ಅವಕಾಶವಿಲ್ಲವೇ? ಮಕ್ಕಳಿಗೆಕೆ ಇಂತ ಘೋರ ಶಿಕ್ಷೆ? ಅವರಿಗೆ ತಪ್ಪು ಮಾಡಲು ಯಾಕೆ ನಾವು ಬಿಡುತ್ತಿಲ್ಲ? ನಿವೇನಾದರು ಹಳ್ಳಿಯಲ್ಲಿ ಹುಟ್ಟಿ ಬೆಳೆದವರಾಗಿದ್ದರೆ ಒಂದು ನಿಮಿಷ ಯೋಚಿಸಿನೋಡಿ, ನಿಮ್ಮ ಬಾಲ್ಯ ಎಷ್ಟು ಮಧುರವಾಗಿತ್ತು ಎಂದು. ಎಷ್ಟು ಬಾರಿ ಕೆರೆಯ ನೀರಿನಲಿ ಮಿಂದು ಎದ್ದಿದ್ದು ಅಂತ ನೆನಪಿಡಲಾಗದು. ರಜಾ ದಿನಗಳಲ್ಲಿ ಎಷ್ಟು ಸಾರಿ ನೀವು ಮದ್ಯಾಹ್ನದ ಊಟವನ್ನು ಸವಿದಿದ್ದಿರಿ? ಅದನ್ನೆಲ್ಲ ನೆನೆದರೆ ನಿಮ್ಮ ಮುಖ ಅರಳುವದು, ಹಾಗೆ ನಮ್ಮ ಬಾಲ್ಯದ ನೆನಪನ್ನು ಬಿಚ್ಚಿಡುತ್ತಾ ಹೋದರೆ ಒಂದು ದಿನವು ಸಾಲದು. ನಾವು ನಮ್ಮ ಮುಂದಿನ ಪೀಳಿಗೆಗೆ ನಮ್ಮ ಬಾಲ್ಯವನ್ನು ಎಷ್ಟು ಸುಂದರವಾಗಿ ವರ್ನಿಸಬಲ್ಲೆವು ಆದರೆ ಅವರು ಮನೆಯ ಮುಂದೆ ಆಟ ಆಡುತ್ತಿದ್ದಾರೆ ಅದನ್ನು ನೋಡಿಕೊಂಡಿರಲು ನಮ್ಮಿಂದಾಗದು. ನಮ್ಮ ಬಾಲ್ಯವನ್ನು ಯಾರಾದರು ಕಸಿದುಕೊಂಡಿದ್ದಾರೆ? ಹಾಗಿದ್ದರೆ ನಮ್ಮ ಸ್ವಂತ ಮಕ್ಕಳ ಬಾಲ್ಯವನ್ನು ನಮ್ಮ ಪ್ರತಿಸ್ತೆಗಾಗಿ ಯಾಕೆ ಕೊಳ್ಳೆಹೊಡೆಯುತ್ತಿದ್ದೇವೆ?  ಅವರಿಗಂತ ಒಂದು ಬದುಕಿದೆ ಅದನ್ನು ಅನುಭವಿಸಲು ಬಿಡೋಣ. ಕಬ್ಬಿಣ ಕಾಯ್ದಾಗ ಬಾಗುವದು ಎಂದಾದರೆ ನಾವು ನಮ್ಮ ಮಕ್ಕಳನು ಸಮಯಬಂದಾಗ ಅವರ ಭವಿಷದಬಗ್ಗೆ ನಿರ್ದರಿಸಲು ಸಹಕರಿಸುತ್ತಿಲ್ಲ? ಅವರ ಬಾಲ್ಯವನ್ನು ನಾವು ಕಿತ್ತುಕೊಂಡಿದ್ದು ತಪ್ಪಲ್ಲವೆಂದು ನಮಗನಿಸಿದರೆ ಅವರು ಮುಂದೆ ದೊಡ್ಡವರಾಗಿ ನಮ್ಮನು ಮನೆಯಿಂದ ಹೊರಹಾಕುತ್ತಿರುವದರಲ್ಲಿ ತಪ್ಪೇನಿದೆ?

ಹಿಂದೆ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಅವಿಭಕ್ತ ಕುಟುಂಬಗಳು ಕಾಣಸಿಗುತ್ತಿದ್ದವು. ಈಗಿನ ಸಂದರ್ಭದಲ್ಲಿ ನಗರಪ್ರದೇಶದಲ್ಲಿ ಒಬ್ಬ ತಂದೆ ತನ್ನ ಮಗ ಮದುವೆ ವಯಸ್ಸಿಗೆ ಬಂದರೆ ಇನ್ನೊಂದು ಮನೆ ಮಾಡಬೇಕು ಅನ್ನುವ ಚಿಂತೆ ಯಾಕಂದರೆ ಅವನಿಗೆ ತನ್ನ ಮಗ ಮತ್ತು ಸೊಸೆ ಆನಂದವಾಗಿ ಕಾಲ ಕಳೆಯಬೇಕೆಂದು ಮತ್ತು ಪ್ರತಿಷ್ಠೆಗಾಗಿ. ಮಗನು ದುಡಿಯಬೇಕು ಮತ್ತು ಸೊಸೆಯೂ ದುಡಿಯಬೇಕು, ದುಡ್ಡಿನ ತೊಂದರೆಯಲ್ಲ ಆದರೆ ಕನಸಿನ ಚಿಂತನೆ. ಮನೆಯಮುಂದೆ ಒಂದು ಕಾರು ಇದ್ದರೆ ನೆಮ್ಮದಿ ಸಿಗದು ಬದಲಿಗೆ ಮನೆಯಲ್ಲಿ ಇರುವ ಚಿಕ್ಕ ಮಕ್ಕಳಿಗೆ ಶಾಲೆಗೇ ಹೋಗಲು ಸಹಿತ ಕಾರು ಬೇಕು ಮತ್ತೆ ಅದಕ್ಕೆ ಒಬ್ಬ ಡ್ರೈವರ್ ಅವಶ್ಯಕತೆ ಇದೆ. ಒಂದು ಮನೆ ಇದ್ದರೆ ಸಾಲದು ತನ್ನ ಹೆಸರಿಗೆ ಒಂದು ಮಡದಿ ಹೆಸರಿಗೆ ಇನ್ನೊಂದು ಮಗನ ಹೆಸರಿಗೆ ಮತ್ತೊಂದು ಹೀಗೆ ಮನೆಯಲ್ಲಿ ಇರುವ ಪ್ರತಿಯೊಬ್ಬರ ಹೆಸರಿಗೂ ಒಂದು ಮನೆ ಮಾಡಬೇಕು ಎಂಬ ದುರಾಲೋಚನೆ. ನಾನೇನು ಅದರಿಂದ ಹೊರತಾಗಿಲ್ಲ.

ನಮ್ಮ ಬಾಲ್ಯದಲ್ಲಿ ಆಡಿರುವ ಆಟಗಳ ಹೆಸರು ನೆನಪಿರುತ್ತೆ. ಚಿನ್ನಿ-ದಾಂಡು, ಲಗೋರಿ, ಕಳ್ಳ-ಪೋಲಿಸ್, ಗೋಲಿ, ಕಬಡ್ಡಿ, ಕೋಕೋ ಆದರೆ ಇವುಗಳಲ್ಲಿ ನಮ್ಮ ಮಕ್ಕಳಿಗೆ ಯಾವ ಆಟ ಗೊತ್ತಿದೆ? ಹ ಹ... ಅವರಿಗೆ ಗೊತ್ತಿರುವದು ಕ್ರಿಕೆಟ್, ಡಾನ್ಸ್ (ಭರತನಾಟ್ಯ ಅಥವಾ ಇನ್ನಾವುದೇ ಭಾರತೀಯ ನಾಟ್ಯಗಳನ್ನು ಹೊರತುಪಡಿಸಿ) . ನಾವು ಎಷ್ಟು ಉದಾರ ಮನಸ್ಸಿನವರಲ್ಲವೇ? ಪರದೇಶದ ಆಟ ಕಲಿಯಲು ಇಲ್ಲ ಆಡಲು ಸಾಕಷ್ಟು ಹಣವನ್ನು ಕರ್ಚು ಮಾಡಬಲ್ಲೆವು ಆದರೆ ನಮ್ಮ ದೇಶದ ಆಟವನ್ನು ನಮ್ಮ ಮಕ್ಕಳು ಅಡುತ್ತಿರಲು ನೋಡಿಕೊಂಡು ಸುಮ್ಮನಿರಲಾಗದು. ಇನ್ನಾದರೂ ನಾವು ಸ್ವಲ್ಪ ಗಂಭೀರವಾದರೆ ಒಳ್ಳೆಯದು, ನಮ್ಮ ಮಕ್ಕಳ ಮತ್ತು ದೇಶದ ಭವಿಷ್ಯ ನಮ್ಮ ಕೈಲಿದೆ. ನನ್ನ ಒಬ್ಬನ ಶ್ರಮದಿಂದ ಏನು ಬದಲಾಗದು ಎಂದು ಯೋಚಿಸುವ ಬದಲು, ನನ್ನಿಂದ ಬದಲಾಗದೆ ಇರದು ಎಂದು ನೋಡಿ. ಇಂಗ್ಲಿಷ್ ಮಾಧ್ಯಮದಲ್ಲೇ ನಿಮ್ಮ ಮಕ್ಕಳನು ಕಲಿಸಬೇಕೆಂಬ ಅಸೆ ಇದ್ದರೆ ತಪ್ಪೇನು ಅಲ್ಲ, ಆದರೆ ಅದರ ಜೊತೆಗೆ ನಮ್ಮ ಸ್ವಂತಿಕೆಯ ಬಗ್ಗೆ ಯಾಕೆ ಯೋಚಿಸುವದಿಲ್ಲ? ಬನ್ನಿ ಹೆಮ್ಮೆಇಂದ ಮುಂದೆ ನಡೆಯೋಣ.


-ಅನಿಸಿದ್ದು ಕಾಣಬಹುದು
ಮಲ್ಲಪ್ಪ.

1 comment:

  1. "ನಗರಪ್ರದೇಶದಲ್ಲಿ ಒಬ್ಬ ತಂದೆ ತನ್ನ ಮಗ ಮದುವೆ ವಯಸ್ಸಿಗೆ ಬಂದರೆ ಇನ್ನೊಂದು ಮನೆ ಮಾಡಬೇಕು ಅನ್ನುವ ಚಿಂತೆ " Idu yeshtara mattige sari yembudu avaravara tarkekke bitta vichara!!!

    Article is good Keep going..... :)

    ReplyDelete